ಉರುಳು ಹಕ್ಕಿ
ಕೊರೇಸಿಯೈಡ್ ವಂಶದ (ಫ್ಯಾಮಿಲಿ) ಒಂದು ಕುಲಕ್ಕೆ (ಜೀನಸ್) ಸೇರಿದೆ (ರೋಲರ್ ಬರ್ಡ್). ಇದರಲ್ಲಿ ಹದಿನಾರು ಪ್ರಭೇದಗಳಿವೆ. ಈ ಹೆಸರಿಗೆ ಕಾರಣ. ಗರಿಗಳ ಬಣ್ಣ ನೀಲಿ. ಆದರೆ ಅಲ್ಲಲ್ಲಿ ಹಸಿರು ಚಿಮುಕಿಸಿದಂತಿರುವುದು, ಪೂರ್ವಗೋಳದಲ್ಲಿ ಜೀವಿಸುವ ಯೂರಿಟೋಮಸ್ ಓರಿಯೆಂಟ್ಯಾಲಿಸ್ ಅಥವಾ ಡಾಲರ್ ಉರುಳುಹಕ್ಕಿಗಳು ದಕ್ಷಿಣ ಸೈಬೀರಿಯದಿಂದ ಆಸ್ಟ್ರೇಲಿಯದವರೆಗೆ ಹಬ್ಬಿವೆ. ಕೊರೇಸಿಯಸ್ ಬೆಂಗಾಲೆನ್ಸಿಸ್‍ನ್ನು ಭಾರತದ ಬ್ಲೂಜೇ ಎಂದು ಕರೆಯುವರು. ಇದೂ ಸೇರಿದಂತೆ ಭಾರತದಲ್ಲಿ ಮೂರು ಬಗೆಯ ಉರುಳುಹಕ್ಕಿಗಳು ಕಂಡುಬರುತ್ತವೆ. ಅವೆಂದರೆ, ಯೂರೋಪಿಯನ್ ಉರುಳು ಹಕ್ಕಿ, ಭಾರತದ ಉರುಳು ಹಕ್ಕಿ ಹಾಗೂ ಪೂರ್ವದ ಅಗಲ ಕೊಕ್ಕಿನ ಉರುಳು ಹಕ್ಕಿ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡುಹಕ್ಕಿ ಹೆಣ್ಣನ್ನು ಒಲಿಸಿಕೊಳ್ಳಲು ಗಾಳಿಯಲ್ಲಿ ಲಾಗ ಹಾಕುತ್ತದೆ. ಈ ನಡವಳಿಕೆಯಿಂದಲೇ ಇದನ್ನು ಉರುಳುಹಕ್ಕಿ ಎಂದು ಕರೆಯುವುದು. ಭಾರತದ ಉರುಳು ಹಕ್ಕಿ ಕರ್ನಾಟಕದ ರಾಜ್ಯ ಪಕ್ಷಿ.												
(ಪಿ.ಎ.ಆರ್.)
									(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ